ಧ್ವನಿ ಶೋಧನೆ:

Sunday, October 1, 2017

125.Karnarjuna Kalaga

28-Nov-2016

Title         : 125.Karnarjuna
PrasangaTitle : Karnarjuna Kalaga
Kavi          :
EventDate     : 28-Nov-2016
Place         : Kekanaje Shambhatra mane pooje
Dwandwa       : Balipa-PrasadaBalipa
Bhagavataru   : Balipa Narayana Bhagavataru;Prasada Balipa
Maddale       : Guruprasad Bolinjadka
Chende        : Delantamajalu Subrahmanya Bhat
Patragalu     :
Karna:Sunnambala Vishweshwara Bhat;
Shalya:Vidvan Hiranya Venkateshwara Bhat;
Arjuna:Raviraja Paneyala;
Krishna:Hareesh Bolantimogaru;
Sarpastra:Sudhakara Jain Hosabettuguttu






[Forwarded from Paneyala]

ಆಪ್ತ ಅಶ್ವಸೇನ.

ಕೇಕಣಾಜೆ ಶಂಭಟ್ಟರಲ್ಲಿ ಪೂಜೆ.( ನವಂಬರ ೨೮-೨೦೧೬)ಆಮೇಲೆ ತಾಳಮದ್ದಳೆ. ನಾನು ವಿಶ್ವಣ್ಣನ ಸಾರಥಿ. ಇನ್ನೇನು ಹೊರಡುವ ಸಮಯ ದಾಟಿತ್ತು. ಆಗ ನಮ್ಮ ಸುಧಾಕರ ಜೈನರ ಫೋನು.
ರಿಸೀವ್ ಮಾಡುವನಾ ಬೇಡವಾ...
ತಾಳಮದ್ದಳೆ ಸುದ್ದಿ ತೊಡಗಿದರೆ ,ಬೇಗ ನಿಲ್ಲಿಸುವ ಜನ ಅಲ್ಲ ಸುಜೈ. ಅದು ಬಿಟ್ಟು ಬೇರೆ ಮಾತಾಡುವುದೂ ಕಡಿಮೆ !

ಅಳೆದೂ ಸುರಿದೂ... " ಹಲೋ " ಹೇಳಿದೆ.
"ಊರಿಗೆ ಬಂದಿದ್ದೇನೆ,ಇವತ್ತಿನ ಪ್ರೋಗ್ರಾಮಿಗೆ ನಾನೂ ಬರ್ತೇನೆ..
ಬೀಸೀರೋಡಿಂದ ೧೯ ಕಿಮೀ ಹಿಂದೆ,ಯಮ ವೇಗದಲ್ಲಿ ಬರ್ತಾ ಇದ್ದೇನೆ..
ದಾರಿ ಹೇಳಿ ಸರ್.."
ಕೇಕಣಾಜೆ - ಅದು ಸಾಕ್ಷಾತ್ ಗಿರಿವ್ರಜ ! - ಅಲ್ಲಿರುವವರು ಮಾತ್ರ ಸಾತ್ವಿಕ ಪುರೋಹಿತ ಕುಟುಂಬ -
ದಾರಿ ಹೇಳಿ ಅಯ್ತು. ನಾವು ಹೊರಟಾಯ್ತು.
ದುರ್ಗಮ ದಾರಿ,ಬರುವವರೋ - ಬೆಂಗಳೂರುವಾಸಿ...ಹೇಗೋ ಏನೋ !
ನಾವಲ್ಲಿ ತಲಪುವುದರೊಳಗೆ,ಮೂರುಬಾರಿ ಕಾಲ್ ಬಂದಿತ್ತು.
ದಾರಿ ಗೊತ್ತಿದ್ದ ನಾವು ತಲಪಿ, ಗಂಟೆ ಅರ್ಧ ಆಗುವುದರಲ್ಲಿ ಸುಜೈ ನಮ್ಮ ಮುಂದೆ ನಗುತ ನಿಂದಿರ್ದರು.
ಎರಡನೆ ಪಂಕ್ತಿ ಊಟ ಆಗದೆ ತಾಳಮದ್ದಲೆ ಸುರು ಆಗುವಂತಿಲ್ಲ.
ಬಲಿಪರ ಪದ.ದೇಲಂತ ಮಜಲು & ಬೊಳಿಂಜಡ್ಕ ಹಿಮ್ಮೇಳ ಜೊತೆ.
ವಿಶ್ವಣ್ಣನ ಕರ್ಣ - ಹಿರಣ್ಯರ ಶಲ್ಯ ಪ್ರಧಾನ ಆಕರ್ಷಣೆ.
ಬೊಳಂತಿಮೊಗರು - ಕೃಷ್ಣ,ನನ್ನ ಅರ್ಜುನ.
ಹಿರಣ್ಯರು ಬಂದು ಜೈನರ ಕೈ ಹಿಡಿದು-
 'ನೀವೊಂದು ಸರ್ಪಾಸ್ತ್ರ ಹೇಳಿ ' ಅಂದ್ರು.
ಕೊಸರಾಡಿದ ಸುಧಣ್ಣ ,ವಿಶ್ವಣ್ಣನೂ ಧೈರ್ಯ ಹೇಳಿದ ಮೇಲೆ ಸಮ್ಮತಿಸಿದ್ರು.
  ತಮ್ಮ ಸರದಿ ಬಂದಾಗ ತುಂಬ ನಾಜೂಕಾಗಿ,ಅತಿರೇಕಗಳಿಲ್ಲದೆ,ಅಶ್ವಸೇನ ಹೇಳಿದ್ರು.
 ಸರ್ವರೂ ಮೆಚ್ಚುವಂತೆ..

ಕರ್ಣನಿಗೇ ತಿಳಿಯದೆ ಬತ್ತಳಿಕೆ ಸೇರಿದ ಸರ್ಪಾಸ್ತ್ರ.

ಆಹ್ವಾನವಿಲ್ಲದೆಯೂ ಶುದ್ಧ ಕಲಾಭಿಮಾನಿಯಾಗಿ,ಪೂಜೆ ಊಟ,ತಾಳಮದ್ದಳೆಗಳಲ್ಲಿ ಭಾಗಿಯಾದ ಸುಧಣ್ಣ.

ವಿಫಲನಾಗಿ ಮರಳಿಬಂದು ಅರ್ಜುನನಲ್ಲಿ ಗೋಗರೆದ ನಾಗರಾಜ.

ಕೃತಕೃತ್ಯನಾಗಿ ಅಭಿಮಾನಾಸ್ಪದನಾದ ಜೈನ್.

ಅವಕಾಶಕ್ಕಾಗಿ ಹಂಬಲಿಸಿದ ಸರ್ಪ.

ನಿರುಮ್ಮಳವಾಗಿ ತಾಳಮದ್ಲೆ ಆಸ್ವಾದಿಸುವ ಅವಕಾಶ ತಪ್ಪಿ ಹೋಗ್ತದಲ್ಲ - ಅರ್ಥಗಾರಿಕೆ ಇಷ್ಟವೇ ಆದರೂ - ಕಳವಳಿಸಿದ ಸುಜೈ.

ಸೇರಿದ ಪಕ್ಷಕ್ಕೂ ಬೇಡವಾಗಿ,ವಿಪಕ್ಷನಾಯಕನಿಂದ ಛಿದ್ರನಾದ ಅಶ್ವಸೇನ.

ಅರ್ಥಗಾರಿಕೆ ಮುಗಿಸಿ, ಜಾದೂ ನೋಡುವ ಮಗುವಿನಂತೆ ಮಂದೆ ಕುಳಿತು ಶಲ್ಯ - ಕರ್ಣ ಸಂವಾದ ಕೇಳಿದ ಸುಧಣ್ಣ..


ನಾವು ನಾಲ್ವರಿಗಷ್ಟೇ ಪರಿಚಿತನಾಗಿದ್ದು,ಆಮೇಲೆ, ಅಲ್ಲಿದ್ದ ಎಲ್ಲರ ವಿಶ್ವಾಸ ಗಳಿಸಿಕೊಂಡ  ಸುಧಾಕರ ಜೈನ್..
      - ಇದು ಅನಾಹೂತನೊಬ್ಬ ಆತ್ಮೀಯನಾದ ಬಗೆ.

ಲೇಖನ: ರವಿರಾಜ ಪನೆಯಾಲ(ಯಕ್ಷಗಾನ ಕಲಾವಿದರು)


https://drive.google.com/open?id=0B62TykJeO5kxaXBNbVdIZTY0LVk

No comments:

Post a Comment